ಕೃತಜ್ಞತೆಗಳು


1. ಈ ಬ್ಲಾಗ್ ಅನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಈ ಬ್ಲಾಗ್ ವೀಕ್ಷಿಸುತ್ತಿರುವ ಹಾಗೂ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಿರುವ ವೀಕ್ಷಕರೇ ನನಗೆ ಉತ್ತಮವಾದ ಸ್ಪೂರ್ತಿಯಾಗಿದ್ದುಎಲ್ಲ ವೀಕ್ಷಕರಿಗೂ ಈ ಮೂಲಕ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
2. ಈ ಬ್ಲಾಗ್ ಪ್ರಾರಂಭಿಸಲು ಹಾಗೂ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗಲು ಸಹಕರಿಸುತ್ತಿರುವ ನನ್ನ ಕುಟುಂಬದ ಎಲ್ಲ ಸದಸ್ಯರಿಗೂ (ನನ್ನ ಅಪ್ಪ-ಅಮ್ಮನವರಾದ, ಎಂ.ಸತ್ಯನಾರಾಯಣರಾವ್, ಎಸ್.ಅನ್ನಪೂರ್ಣಮ್ಮ, ನನ್ನ ಪತ್ನಿಯಾದ ಐಶ್ವರ್ಯ) ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
3. ನಮ್ಮ ಕರ್ನಾಟಕ ರಾಜ್ಯದ ಹರಿಹರದ ಬಾಪು ಅವರ ಕೊಳಲು ವಾದನವನ್ನು ವಿದೇಶೀ ರಾಯಭಾರಿಗಳಿಗೆ ಪರಿಚಯಿಸಲು "ಭಾರತೀಯ ವಿದೇಶಾಂಗ ಸಚಿವಾಲಯ"ವು "ಸಂಗೀತ ಒಂದು ಚಿಕಿತ್ಸೆ" ಎಂಬ ಹೆಸರಲ್ಲಿ ಸಿ.ಡಿಗಳನ್ನು ಬಿಡುಗಡೆ ಮಾಡಿದೆ. ಸಂಗೀತ ಕ್ಷೇತ್ರದಲ್ಲಿ ದೇಶದ ಬೆರಳೆಣಿಕೆಯ ಜನ ಇಂತಹ ಸಾಧನೆ ಮಾಡಿದ್ದು, ನಮ್ಮ ಕರ್ನಾಟಕದಿಂದ ಬಾಪು ಪದ್ಮನಾಭ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಇಂತಹ ಮಹತ್ಸಾಧನೆ ಮಾಡಿರುವ ಶ್ರೀಯುತರು ಭಕ್ತಿಸಾಗರ ಬ್ಲಾಗ್ ವೀಕ್ಷಿಸಿ ತಾವಾಗಿಯೇ ಕರೆ ಮಾಡಿ ಅಭಿನಂದನೆ ಸಲ್ಲಿಸಿರುವುದಲ್ಲದೇ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಎಲ್ಲಾ ಸಿ.ಡಿಗಳನ್ನು ಭಕ್ತಿಸಾಗರಕ್ಕೆ ಉಡುಗೊರೆಯಾಗಿ ಕಳುಹಿಸಿದ್ದಾರೆ ಮಾತ್ರವಲ್ಲದೆ ಭಕ್ತಿಸಾಗರ ಬ್ಲಾಗ್ ಗೆ ಅಳವಡಿಸುವ ಸಲುವಾಗಿಯೇ ಮೆಡಿಟೇಷನ್ ಮ್ಯೂಸಿಕ್ ಒಂದನ್ನು ಸಿದ್ಧಪಡಿಸಿ ಕಳುಹಿಸಿದ್ದಾರೆ. ಶ್ರೀಯುತರ ಅಭಿಮಾನಕ್ಕೆ ಈ ಮೂಲಕ ಹೃದಯಪೂರ್ವಕ ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ. 

Bapu Padmanabha.
Aantardhwani Productions,
20/1,7th Cross,
NR Colony , Basavanagudi.
Near Katte Bhavana.
Bangalore-560 019.
Ph : (9972994941)

4. ನನ್ನ ಈ ಬ್ಲಾಗ್ ಗೆ ಅವಶ್ಯಕತೆಗೆ ತಕ್ಕಂತೆ ಕೆಲವು ಫೋಟೋಗಳು ಹಾಗೂ ವಿಡಿಯೋಗಳನ್ನು ಬಳಸಿಕೊಳ್ಲಲಾಗುತ್ತಿದ್ದು, ಇದಕ್ಕಾಗಿ Videoder, youtube, ಹಾಗೂ google ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

No comments: